top of page
ಹರಿಯುವಂತೆ ಧೂಪ
ಹರಿಯುವಂತೆ ಧೂಪ ಉರಿಯುವಂತೆ ದೀಪ ಸರಿದುವೆಷ್ಟೊ ಹಿರಿಯ ಜೀವ ನಿಲಿಸಿ ಮಧುರ ನೆನಪ ಜನಿಸಿದಂದಿನಿಂದ ನದಿ ಉಣಿಸಾದರು ಕಡಲಿಗೆ ಕಡಿಯದೆ ಇದೆ ಅದರ ಧಾರೆ ಕಡೆಯೆಲ್ಲಿದೆ ಬದುಕಿಗೆ? ಅಳಿಸಿದೆ ನಿಜ ಕಾಲ ಬೆಳೆಸಿದೆ ಬಾಳೆಲ್ಲವ, ಆದರೇನು ತಡೆಯಬಹುದೆ ಬಾಳಿನ ಚಿರಚಲನವ? ಸಾಗುವವರೆ ಎಲ್ಲರು ಸಾಗ ಿದಂತೆ ಹಿರಿಯರು, ಮಾಗಿ ಬಂದರೇನು ಮತ್ತೆ ಚಿಗುರು ನಕ್ಕೆ ನಗುವುದು. ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು
bottom of page