top of page
ಒಂದು ಬಾರಿ ಬಂದು ಬಿಡು
ಒಂದು ಬಾರಿ ಬಂದುಬಿಡು ನನ್ನ ಮುಂದೆ ನೀನು ನಿನ್ನ ರೂಪ ತುಂಬಿಕೊಳುವೆ ಕಣ್ಣಿನೊಳಗೆ ನಾನು ಹೃದಯ ಕೂಗಿ ಕರೆಯುತಿದೆ ನಿನ್ನ ಬಾ ಎಂದು ಮನವು ಕಾತರಿಸುತಿದೆ ನಿನ್ನ ಕಾಣಲೆಂದು ಎದೆಯ ತುಂಬ ನೀನೆ ಇರುವೆ ಕನಸಿನಲ್ಲೂ ಬರುವೆ ಮನವನೆಲ್ಲ ಆವರಿಸಿ ಎನಿತು ಮುದವ ತರುವೆ ನನ್ನ ನೋಟ ಹರಿಯು ವಲ್ಲಿ ನಿನ್ನ ನಾ ಕಾಣುತಿರುವೆ ನನ್ನ ಜೀವದೊಳಗೆ ನೀನು ಜೀವವಾಗಿ ಇರುವೆ ಜಗದ ಅಣು ಅಣುವಿನಲ್ಲೂ ಚೈತನ್ಯ ನೀನೆ ಪ್ರಭುವೆ ಕಾಯುತಿಹುದು ನಮ್ಮನೆಲ್ಲ ನಿನ್ನಪಾರ ಪ್ರೀತಿಯೊಲುಮೆ ವೆಂಕಟೇಶ ಬೈಲೂರು ಕವಿ ಕ್ರಿಯಾಶೀಲ ಬರಹಗಾರ ವೆಂಕಟೇಶ ಬೈಲೂರ ಅವರ "ಒಂದು ಬಾರಿ ಬಂದು ಬಿಡು" ಕವಿತೆ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
bottom of page