top of page

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್ ಬರ್ತಾ ಇದ್ರೆ ಗೇಟ್‍ನಲ್ಲೇ ಢಂ ಢಮಾರ್ ಢಮ್ ಬಲೂನೆಲ್ಲಾ ತಮ್ಮಷ್ಟಕ್ಕೆ ಒಡದ್ಹೋಗತ್ವೆ ಏಕ್‍ದಮ್ ಮೇಡಮ್ ಬರೋವರ್ಗೆ ಮಾತ್ರ ಹಾರಾಡಿಕೊಂಡಿರೋಕೆ ಫ್ರೀಡಮ್
ಯಾವ ಜಾದೂಗಾರನಿಂದ ಕೊಂಡು ತಂದ್ರೋ ಇದನ್ನ ಮೇಡಮ್ಮೇ ಹಚ್ಚಿದ್ದಿದು ವನ ಮಹೋತ್ಸವದ ದಿನ ಹೂವು ಹಣ್ಣು ಏನೂ ಇಲ್ಲ ಬಲೂನ್ ಬರಿ ಬಲೂನ್ ಬಣ್ಣ ಬಣ್ಣದ ದುಂಡನೆ ಉದ್ದನೆ ನಾನಾ ಸೈಜಿನ ಬಲೂನ್
ಅವರ ಬರೋವಾಗ ಅನಬೇಕಂತೆ ಢಮ್ಮಾರೆ ಢಮ್ ಢಮ್ ತಿಳಿದ್ಹೋಗ್ಬೇಕಂತೆ ಎಲ್ರಿಗೂ ಬಂದ್ರು ಮೇಡಮ್ ಮೇಡಮ್ ಎಲ್ಲಿದ್ರೂ ಅಲ್ಲೇ ಸುಮ್ನೆ ನಿಂತಬಿಡಬೇಕಂತೆ ಹಾಂ ಸೆಲ್ಯೂಟ್ ಮಾಡಬೇಕಂತೆ ನಿಂತನಿಂತಲ್ಲೇ ಹೂಂ
ಮೇಡಮ್ ಆರ್ಡರ್ ಮಾಡಿದ ಹಾಗೇ ನಡಕೊಳ್ಳತ್ತೆ ಮರಾನೂ ನಮ್ ಹಾಗೆ ಅದು ಅದು ಸೌಂಡ್ ಮಾಡಿಕೊಂಡು ದಿನಾನೂ ! ಬೇಜರಾದ್ರೂ ಬಲೂನಗೆಲ್ಲಾ ಕೇಳ್ತಾ ಇಲ್ಲ ದೇವರೂನೂ ಹುಟ್ಟೋದೇ ಸಾಯೋಕಾ ? ಅಂತ ಅನಕೊಂಡು ಊಂ ಊಂ ಢಮ್ ಢಮ್ ಢೂಮ್ !
ಆನಂದ ಪಾಟೀಲ್

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್
bottom of page