top of page
ಕಡಿದರೂ ಮಡಿಯಲಾರದ ಜೀವ
ನನ್ನೊಳಗಿದೆ ಜೀವಜಲ ಗರ್ಭಸ್ಥ ಶಿಶುಗಳನು ಹೊತ್ತ ತಾಯಿ ನಾನು ಹೊರಹಾಕದಿರಲಾರೆ ; ನನ್ನನೆಷ್ಟು ಕಡಿದರೂ ಬಡಿದರೂ, ಒಡಲ ಕುಡಿಗಳನಾದರೂ ಕಂಡು ಬದುಕುವ ಆಸೆ ! ಕಳೆದುಕೊಂಡಿದ್ದು ಮರಳಿ ಪಡೆಯಲಾರೆ , ಉಳಿದದ್ದನಾದರೂ ಉಳಿಸಿಕೊಳ್ಳುವ ತವಕ. ಒಡಲೊಡೆದು ಹೊರಬಂದ ಜೀವದ ಕುಡಿಗಳನು ನೋಡಿ ಹಿಗ್ಗುತಿದೆ ಜೀವ. ಮತ್ತೆ ನಾ ಚಿಗುರುವೆನೊ, ಇದ್ದಲ್ಲೆ ಸಾಯುವೆನೊ ನಾನರಿಯೆ ಬದುಕು ನನ್ನದಾದರೂ ಬದುಕು ಸಾವುಗಳು ನನ್ನ ಕೈಯಲ್ಲಿಲ್ಲ. ಬಂದವರೊಮ್ಮೆ ಹೋಗಲೇಬೇಕಲ್ಲವೆ? - ಎಲ್. ಎಸ್. ಶಾಸ್ತ್ರಿ
bottom of page