top of page

ಸಂವತ್ಸರದ ಬದಲಾವಣೆ

ಸಂಭ್ರಮಕ್ಕೊಂದು ನೆವಬೇಕು.ಕಹಿ ಅನುಭವಗಳ ನಡುವೆ ಕೊಂಚ ಉಸಿರಾ ಡಲು ಸವಿನೆನಪುಗಳು ಬೇಕು.ಬದುಕು ಎಂದಿಗೂ ಯಾರ ಸಲುವಾಗಿಯು ನಿಲ್ಲ ಲಾರದು.ಅದು ಸದಾ ಹರಿವ ನೀರಂತೆ ತನ್ನ ದಿಕ್ಕನ್ನು ತಡೆದವರ ಪಾಲಿಗೆ ತಡೆದು ನೀರಾಗಿ ಜೀವಕಳೆಯ ತುಂಬುವ ಜಲ ಧಾರೆಯಂತೆ.ನನಗೂ ಒಮ್ಮೊಮ್ಮೆ ಅನಿ ಸಿದ್ದಿದೆ‌.ನಾನು ನೀರಾಗಿ ಹರಿದು ಹೋಗಿ ಬಿಡಲೇ? ಇಲ್ಲ ಭೂವಿಯೊಡಲಲಿ ಅವಿ ತು ಬೇರುಗಳಿಗೆ ಹನಿಹನಿಯಾಗಿ ತೊಟ್ಟಿ ಕ್ಕುವ ಝರಿಯಾಗಿ ಶಾಶ್ವತವಾಗಿ ಹುದು ಗಿಬಿಡಲೇ ಎಂದು.ಅದು ಆಗದ ಮಾತು. ನನ್ನ ಹಿಡಿದಿಟ್ಟುಕೊಳ್ಳುವ ತಾಕತ್ತು ಬೇರು ಮಣ್ಣಿಗೂ ಇರಬೇಕಲ್ಲ....?


ಪ್ರತಿ ಸಂವತ್ಸರದ ಬದಲಾವಣೆಯಲ್ಲಿ ಹೊಸರೂಪ ತಳೆದು ಜೀವಜಗತ್ತಿಗೆ ಹೊಸ ಯುಗದ ಮುನ್ನುಡಿ ಬರೆದವಳು‌ ನಾನು ಎಂಬ ಬಿಗುಮಾನವಿದ್ದರು.ಆ ಸಂವತ್ಸರದಲ್ಲಿ ಬೀಸುವ ಬಿರುಗಾಳಿ, ಪ್ರವಾಹದಂತಹ ಅಬ್ಬರಕೆ ಸೋತು‌ ಸುಣ್ಣವಾಗಿ ನರಳಿದ ಕ್ಷಣಗಳು ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದೆ.ನರಳಿದ ಆರ್ತ ನಾದಗಳು ಬೆಚ್ಚಿ ಬೀಳಿಸುವಂತಹವು. ನಾನು ಯಾಕಾದರೂ ಬದಲಾದೇನೋ ಎಂದು ಕೊರಗಿ ಸಂತೈಸುವವರಿಲ್ಲದೇ ಅಬ್ಬೆಪಾಲಿಯಾಗಿದ್ದೆನೆ.


ನನಗೂ ನಿನ್ನ ಪ್ರತಿಕಣಕಣದಲ್ಲಿ ನೆಲೆನಿ ಲ್ಲುವ ಉಸಿರಾಗ ಬೇಕೆಂಬ ಹೆಬ್ಬಯಕೆ. ನೀನು ಕೈಜಾರಿ ಹೋಗುವ ಮೀನಿನಂತಾ ದಾಗ ಕಡಲಾಳದಲ್ಲಿ ಅವಿತ ನಿನ್ನ ಬರಿಗೈ ಲಿ ಹಿಡಿಯಲಾರದೆ ಒದ್ದಾಡಿದ್ದಿದೆ. ಆಗೊ ಮ್ಮೆ ಈಗೊಮ್ಮೆ ಬಂದು ತಂಪೆ ರೆಚಿದ ನಿನ್ನ ಸ್ಪರ್ಶ ಯುಗಳಿಂದ ಹಂಬಲಿಸಿದ ವಿರಹವನ್ನು ತಣಿಸಲು ತವಕಿಸಿದ್ದಿದೆ. ಎಂಥ ವಿಚಿತ್ರ ನೋಡು..ನಾನು ನೀನು ಬೇರೆಯಾಗದಿದ್ದರೂ ಪ್ರೀತಿಯ ಒರತೆ ಮಾತ್ರ ಝರಿಯಾಗಿ ಸೆಳೆಯದಿದ್ದುದಕ್ಕೆ ನೂರು ಕಾರಣಗಳ ಚಿಮ್ಮಿಸಿದಂತಿದೆ.


ಬೀಸುವ ಗಾಳಿಗೂ,ಬೆಳಗುವ ಹಣತೆಗೂ ಮಿಡಿಯುವ ಹೃದಯಕೂ ಎನೋ ಒಂದು ನಂಟಿದೆ ಅದು ಯಾರ ಅನುಮ ತಿಯ ಪಡೆಯದೇ ನಿನ್ನ ಬರುವಿಕೆಯ ಸುಳಿವು ಅವುಗಳಿಗೆ ಮೊದಲೇ ಸಿಕ್ಕಂತೆ ಭಾಸವಾಗಿತ್ತು.ಯಾವ ಗೊಂದಲಗಳು ನನ್ನದಾಗದೇ ಎಲ್ಲವು ನಿನ್ನದಾಗಿರುವು ದನ್ನು ಬಹು ಜತನದಿಂದ ಕಾಯ್ದು ಕೊಂ ಡಿರುವೆ.ನಾನು ಎನಾಗಿಹೆನೆಂಬ ಸುಳಿವು ದೊರೆತಿಲ್ಲ.ಎಷ್ಟು ಸೂಕ್ಷ್ಮವಿ ಬಾಂಧವ್ಯ. ನಿನ್ನ ಸನಿಹದ ಭಾವಕೆ ಮರುಜೀವ ಬಂದಂತೆ.


ಬೇವು ಬೆಲ್ಲದಂತೆ ಬೆರೆತು ಹೋಗುವ ಅಮೃತಗಳಿಗೆಗೆ ಮನಬಿಚ್ಚಿ ನಲಿದಂತಿದೆ. ನಾನಾವ ಕಬ್ಬಿನ ಗಣಕೆಯಲಿ,ನೀನಾವ ಬೇವಿನೆಲೆಯಲಿ ಒಂದಾಗುವ ಕನಸ ಕಾಣುತ್ತಿದ್ದೆವೋ ನಾನರಿಯೇ...?


- ಶಿವಲೀಲಾ ಹುಣಸಗಿ

8 views0 comments

Yorumlar


bottom of page