top of page

ವೆಂಕಟೇಶ ಹುಣಶಿಕಟ್ಟಿ


ಹೊನ್ನಿನಾಗರಕೆ ಕಣ್ಣು

ಕೃಷಿಯಲ್ಲಿ ಖುಷಿಯಾಗಿ

ಬಾಳುತ್ತಿದ್ದ

ಹೊಸಕೋಟಿಯ

ಹುಣಶೀಕಟ್ಟಿ ಎಂಬೋ

ಪ್ರತಿಷ್ಠಿತ ರಡ್ಡಿ ಮನೆತನ

ಊರಲ್ಲಿ ಅದು,ಆ,ಈ,ತಿದ್ದಿ

ಕೋಟೆಬಾಗಿಲಿನ (ಬಾಗಲಕೋಟೆ)

ಕದವ ತಟ್ಟಿ

ವಿದ್ಯಾ ಕಾಶಿಯಲಿ

(ಕ.ವಿ.ವಿ.ಧಾರವಾಡ)

ವಿಜ್ಞಾನದ ಮಾಸ್ಟರ್ ಆಗಿ (ಎಂ.ಎಸ್ಸಿ.)

ಆದರು ವೃತ್ತಿಯಲಿ ಉಪನ್ಯಾಸಕ

ಪ್ರವೃತ್ತಿಯಲಿ

ಸಾಹಿತ್ಯದ ಪರಿಚಾರಕ

ವಿಜ್ಞಾನದ ವಿಚಿತ್ರಗಳಿಗೆ

ಒಗಟಿನ ರೂಪ !

ಬಾಳಿನ ಬವಣೆಗಳಿಗೆ

ಕಾದಂಬರಿ ಸ್ವರೂಪ !

ವಿಜಯದಶಮಿಯಾಗಿ

ಹರಿದುಬಂದ

ಕವನಗಳೋ

ಸಹಜ ಸರಳ

ವಿರಳಾತಿ ವಿರಳ

ಆಗಾಗ ಕತೆ,ಹಾಸ್ಯ

ಬದುಕಿಗೊಂದಿಷ್ಟು ಲಾಸ್ಯ

ಮಕ್ಕಳೊಂದಿಗೆ ಬಾಳ ಭಾಷ್ಯ

ಬಾಳ ಸಂಗಾತಿ ಶಾಂತ

ನಡುವೆಯೇ ಶಾಂತವಾಗಿ

ನಡೆದರು

ಮಕ್ಕಳಿಗಾಗಿ ಎಲ್ಲವನೂ ಸಹಿಸಿ

ಆದರು

ಪ್ರಶಾಂತ !

ಎಷ್ಟೋ ಪ್ರಶಸ್ತಿಗಳು

ಅರಸಿಕೊಂಡು ಬಂದವು

ಆರಕ್ಕೆ ಏರಲಿಲ್ಲ

ಮೂರಕ್ಕೆ ಇಳಿಯಲಿಲ್ಲ

ಈಗ

ಸುಖಿ ಕುಟುಂಬದ ಹಿರಿ ದೊರೆಯಾಗಿ

ಬಾಳುತಿಹರು

ವಿಶ್ರಾಂತ

ಅವರಿಗಿಂದು

ಮರಳಿ ಅರಳಿದ ಎಂಬತ್ತೆರಡು

ಕೋರುವೆನು ಶುಭಾಶಯ

ಇವೊತ್ತು

ನಗುತಿರಲಿ ಯಾವೊತ್ತು

ಶತಕಕ್ಕೆ ನೀಡಲಿ ಮುತ್ತು

ಎಂದನಾ ಗುಣವಂತೇಶ್ವರ

ನಾರಾಯಣ ಶಾಸ್ತ್ರಿ ಗುಣವಂತೆ

ಕುಂಬಾರ ಹಳ್ಳ ಜಮಖಂಡಿ



24 views0 comments

Commentaires


bottom of page