ಮನಸ್ಸಿನ ಸ್ವಸ್ಥತೆಗೂ
ದೇಹದ ಆರೋಗ್ಯಕೂ,
ಎಲ್ಲಿಲ್ಲದ ನಂಟು!!
ಸಮತೋಲನ ಸಾಧಿಸಿದರೆ
ನಿರಾಳತೆ - ನೆಮ್ಮದಿ,
ಸಂತೋಷ ಉಂಟು!!
ಬಡತನವಿದ್ದರೂ ಈ ಮೊದಲು
ತುಂಬಿ ತುಳುಕುತ್ತಿತ್ತು...
ಮಾನಸಿಕ ಆರೋಗ್ಯ!!
ಹಣವಿದ್ದರೂ ಇಂದಿನ ಒತ್ತಡವು
ಹೆಚ್ಚಿಸಿದೆ ಮಾನಸಿಕ ಅಸ್ಥಿರತೆ
ಹೊಸ ರೋಗ -ಅನಾರೋಗ್ಯ!!
ಸುಖಮಯ ಜೀವನಕೆ
ಸಂತೋಷದಿಂದಿರುವುದೇ ಮೂಲ!
ಇದು ಸಹನೆ - ಸಂತೃಪ್ತಿಯಿಂದ
ಬದುಕಬೇಕಾದ ಕಾಲ!!
ಸಾವಿತ್ರಿ ಶಾಸ್ತ್ರಿ, ಶಿರಸಿ
Bình luận