ಅಂಬರಕೆ ಮಲ್ಲಿಗೆಯಂತೆ
ಮನೆಗೆ ನಗೆ ಬೆಳಕು ನೀನು
ಬೆಳದಿಂಗಳ ಬಾಲೆ ಎನ್ನಲೆ
ಬಿದ್ದಲ್ಲಿ ಚಿಗುರುವ ಗರಿಕೆ ಹುಲ್ಲಂತೆ
ಮನವ ತಣಿಸುವ ಅಭಿಮಾನದ
ಮಾನಿನಿ ನೀನು ಏನೆಂದು ಕರೆಯಲೆ
ಎದೆಯೊಳಗೆ ಸಹಸ್ರ ವೇದನವ
ಬಚ್ಚಿಟ್ಟು ಸಂತೈಸುವವಳು ನೀನು
ಕರವೆತ್ತಿ ಮುಗಿಯಲೆ
ತೊಟ್ಟಿಲು ತೂಗುವವಳು ನೀ
ಮಮತೆಯ ಮೊದಲ್ಗುರು ನೀ
ಅವಕಾಶ ಸಿಕ್ಕರೆ ಆಕಾಶಕ್ಕೆ
ಜಿಗಿಯುವೆ ನೀ
ನಮಗೆಲ್ಲ ಗುರು ನೀನೆ
ನಿನಗಾರು ಮಹಾಗುರು
ಹೆಣ್ಣಲ್ಲದೆ ಮತ್ತಿನ್ನಾರು
ನಿನಗೆ ಸರಿಸಮನಾರು
ನೀ ಬಾನು ಭುವಿಯ ಹಾಗೆ
ವಿಶಾಲ ವಿಸ್ತಾರ ಶರಧಿಯ ಹಾಗೆ
ನಿನ್ನ ಹಾಗೆ ಯಾರಿಲ್ಲ
ನಿನಗೆ ಹೋಲಿಕೆ ಇಲ್ಲ
ಏನೆಂದು ಕರೆಯಲಿ
ನೀ ಹೇಳು ಬಾಲೆ.
ಸುವಿಧಾ ಹಡಿನಬಾಳ
Comments