top of page

ತಪ್ಪು - ಸರಿಗಳ ನಡುವೆ

ಅವರವರಿಗೆ ಅವರದೇ ಆದ

ಸರಿ - ತಪ್ಪುಗಳು......!!

ಜೀವನದ ನಡಿಗೆಯ

ಪ್ರತಿ ಹೆಜ್ಜೆಯಲ್ಲೂ.... !!!!


ಮನಸ್ಸು - ಬುದ್ಧಿಯ ತಾಕಲಾಟ!

ವಿವೇಚನೆಯ ಹಿಡಿತಕ್ಕೆ ಸಿಕ್ಕಾಗ...

ಸರಿಯಾಗಿರ ಬಹುದು!

ತಪ್ಪೆನಿಸಲೂ ಬಹುದು....!!


ಕೆಲವೊಮ್ಮೆ ಸರಿ -ಹಲವೊಮ್ಮೆ ತಪ್ಪು!

ಒಮ್ಮತಕ್ಕೆ ಬರಲಾಗದ....

ನಿರ್ಣಯಕ್ಕೆ ನಿಲುಕದ.....

ಅಭಿವ್ಯಕ್ತಿ - ಅಭಿಪ್ರಾಯಗಳು!!


ಅಕಸ್ಮಾತ್ ಒದಗಿ ಬರುವ ಸಂದರ್ಭ

ಒಪ್ಪದಿರುವ ಪ್ರವೃತ್ತಿ - ದ್ವಂದ್ವ ಮನಸ್ಥಿತಿ

ತರುವುದು ಜಿಜ್ಞಾಸೆ!!

ತೋರುವುದು ಆತ್ಮಾವಲೋಕನದ ದಾರಿ!!


ತಪ್ಪಾಯಿತೇ ಎಂಬ ಆತಂಕ!

ಮರುಕ್ಷಣ ಇದೇ ಸರಿ

ಎನ್ನುವ ಸಮಜಾಯಿಸಿ!

ಆತ್ಮವಂಚನೆಯ ಸಾಕ್ಷಿ ಪ್ರಜ್ಞೆ!!


ವ್ಯಕ್ತಿಗತವಾಗಿ ಸರಿಯೆನಿಸಿದ್ದು

ಸಾಮಾಜಿಕವಾಗಿ ತಪ್ಪಾಗಬಹುದು!

ಸಾಮಾಜಿಕ ನ್ಯಾಯ - ಆಚರಣೆ

ವ್ಯಕ್ತಿಗೆ ಸರಿ ಎನಿಸದಿರ ಬಹುದು!!


ಪರರಿಗೆ ಹಾನಿಯನ್ನುಂಟುಮಾಡದ

ತಪ್ಪು - ತಪ್ಪಾಗಲಾರದು!!

ಸಾಮೂಹಿಕವಾಗಿ ಪರಿಗಣಿಸಲ್ಪಟ್ಟಿದ್ದು

ಶಿಕ್ಷಾರ್ಹವಾಗುವುದು..!!


ವಿಭಿನ್ನ ದೃಷ್ಟಿಕೋನಗಳು!!

ಉತ್ತರಿಸುವ ಮುನ್ನ...

ವಿವೇಚನೆ - ವಿವೇಕದ

ಆತ್ಮ ನಿನಾದಗಳು!!


ಸಾವಿತ್ರಿ ಶಾಸ್ತ್ರಿ, ಶಿರಸಿ.

11 views0 comments

Comments


bottom of page