top of page

ಕಳೆವ ದಿನಗಳು

*ಕಳೆವ ದಿನಗಳು*

ದಿನಗಳು ಕಳೆಯುತ್ತವೆ

ಹೀಗೇ ಎಂದು

ಹೇಳಲಾಗದ ಹಾಗೆ.

ಕನಸುಗಳ ಹೊತ್ತವರ,ಹಗಲು--

--ಗನಸುಗಳ ಕಾಂಬವರ

ಕಂಡದ್ದೆಲ್ಲಾ ನನಸು ಮಾಡಿ--

--ಕೊಂಡವರ ತಲೆಯೊಳಗೆ

ಮತ್ತೆ ಹೊಸ ಹೊಂಗನಸುಗಳ

ಬೀಜ ಬಿತ್ತಿ,

ದಿನಗಳು ಕಳೆಯುತ್ತವೆ......

ಬಳ್ಳಿಯಂತೇ ದಿನಗಳು!

ಇರುವಾಗ,ಕನಸಿನ--

ದಂಡೆ ನೇಯುವರು

ಮಾಲೆ ಕಟ್ಟುವರು

ಅದೂ ಆಗದಿರೆ ಕನಸ--

--ಬಿಡಿ ಹೂವ ಮುಡಿಯುವರು......

ಹೀಗೇ ಇರುವರ ಉಳಿಸಿ

ಅಳಿಸಿ ನಗಿಸುತ್ತ,

ದಿನಗಳು ಕಳೆಯುತ್ತವೆ,

ಹೀಗೇ ಎಂದು

ಹೇಳಲಾಗದೆ ಹಾಗೆ,

ದಿನಗಳು............


*ಗಣಪತಿ ಗೌಡ, ಹೊನ್ನಳ್ಳಿ*

*ಅಂಕೋಲಾ*


ಆಲೋಚನೆ.ಕಾಂ ಬಳಗದ ಕ್ರಿಯಾಶೀಲ ಉಪನ್ಯಾಸಕ ಸೃಜನಶೀಲ ಕವಿ ಗಣಪತಿ ಗೌಡ ಹೊನ್ನಳ್ಳಿ ಅಂಕೋಲಾ ಅವರ "ಕಳೆವ ದಿನಗಳು" ಕವನ ನಿಮ್ಮ ಸಹ ಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

24 views0 comments

Comments


bottom of page