top of page

ಕಬೀರ ಕಂಡಂತೆ

ಪ್ರೇಮಭಾವ ಸೊರಗಿದೊಡೆ ಸಂಬಂಧ ರಸಹೀನ‌‌..!


ಆಯಾ ಪ್ರೇಮ ಕಹಾಂ ಗಯಾ, ದೇಖಾ ಥಾ ಜಬ ಕೋಯ/

ಛಿನ ರೋವೈ ಛಿನ ಮೆಂ ಹಸೆ, ಸೋ ತೊ ಪ್ರೇಮ ನ ಹೋಯ//


ಮನುಷ್ಯ ಭಾವನಾಜೀವಿ‌ ಸುಖ-ಶಾಂತಿ ಮತ್ತು ಸಮಾಧಾನಗಳಿಂದ ಬದುಕಲು ಪ್ರೇಮಭಾವ, ಸ್ನೇಹ ಸಂಬಂಧ, ಮಾನವೀಯ ಗುಣಗಳ ಪಾತ್ರ ಬಹು ದೊಡ್ಡದು. ಇದರ ಜೊತೆಗೆ ಪ್ರೀತಿ, ಸ್ನೇಹ, ಮಾನವೀಯತೆಯ ಗುಣಗಳು ಬದಲಾಗದೆ ಅಚಲ- ವಾಗಿದ್ದರೆ ಮಾತ್ರ ಅವುಗಳಿಗೆ ಬೆಲೆಯಿದೆ. ಗೆಳೆಯರ ನಡುವಿನ ಸ್ನೇಹ, ವಿಶ್ವಾಸದ ಭಾವನೆಗಳು ಕಾಲಕ್ಕೆ ತಕ್ಕಂತೆ ಬದಲಾದರೆ,ಅಂಥ ಸ್ನೇಹ ಕ್ಷಣಾರ್ಧದಲ್ಲಿ ಮುರಿದುಬಿದ್ದೀತು. ಪ್ರೇಮಿಗಳ ನಡುವಿನ ಪ್ರೀತಿ, ವಿಶ್ವಾಸದಲ್ಲಿ ಸಂಶಯ ಭಾವನೆ ನುಸುಳಿದಾಗ ಅಂಥ ಪ್ರೀತಿಗೆ ಅರ್ಥವೆಲ್ಲಿದೆ? ಭಗವಂತನ ಜೊತೆಗೆ ಭಕ್ತನ ವಿಶ್ವಾಸ ಕೂಡ ಅಲುಗಾಡದೇ ಇದ್ದರೆ ಮಾತ್ರ ಆ ಭಕ್ತಿ ಮೌಲ್ಯಯುತವಾದೀತು. ಅದೇ ರೀತಿ ಪವಿತ್ರ ಸಂಬಂಧಗಳ ಅಂತರಂಗದ ಭಾವಗಳು ಗಟ್ಟಿಯಾಗಿದ್ದರೆ ಮಾತ್ರ ಅಂಥ ಸಂಬಂಧಗಳಿಗೆ ಬೆಲೆ. ಇಲ್ಲದಿದ್ದರೆ ಮನುಷ್ಯ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತ ನಡೆದರೆ, ಆತನ ಮುಖವಾಡ ಜಗತ್ತಿನ ಎದುರು ಕಳಚಿಬಿದ್ದೀತು!


ಈ ವಿಷಯದ ಕುರಿತು ಸಂತ ಕಬೀರರು,

"ಒಲಿದ ಪ್ರೇಮ ಅದೆಲ್ಲಿ ಮಾಯ, ಕಂಡಿದ್ದರು ಜನರೆಲ್ಲ|

ಕ್ಷಣದಿ ನಗು ಮರುಕ್ಷಣದಿ ಅಳು, ಪ್ರೇಮ ಕಾಣದಲ್ಲ||

ಎಂದು ಉದ್ಗರಿಸಿದ್ದಾರೆ. ಈ ದೋಹೆಯಲ್ಲಿ ಕಬೀರರು, ಪ್ರಿಯ ವ್ಯಕ್ತಿಗಳ ಹೃದಯದಲ್ಲಿ ಪ್ರೇಮಾಂಕುರ ಆದದ್ದನ್ನು ಜನ ನೋಡಿದ್ದಾರೆ. ಆದರೆ ಮರುಕ್ಷಣವೇ ಆ ಪ್ರೇಮ ಮಂಜಿನಂತೆ ಚೆದುರಿ ಹೋಯಿತಲ್ಲ ಎಂದು ಆಶ್ಚರ್ಯ ವ್ಯಕ್ತಪಡಿ- ಸಿದ್ದಾರೆ. ಇದು ಪ್ರೇಮದ ರೂಪವೇ ಅಲ್ಲ. ಬದಲಿಗೆ ಪ್ರೇಮ ಎಂಬ ಭ್ರಮೆ ಮಾತ್ರ. ಕೆಲವರು ತಮ್ಮ ವೈಯಕ್ತಿಕ ಕಾಮನೆಗಳಿಗಾಗಿ ಭಗವಂತನನ್ನು ಪ್ರೀತಿಸಿ, ಆರಾಧಿಸುತ್ತಾರೆ. ಆದರೆಬಾವರ ಮನಸ್ಸಿನ ವಿರುದ್ಧವಾಗಿ ಘಟನೆಗಳು ನಡೆದರೆ, ದೇವರ ಮೇಲೆ ಸಿಟ್ಟಾಗುತ್ತಾರೆ! ಕ್ಷಣದ ಹಿಂದಿದ್ದ ಭಕ್ತಿ, ಪ್ರೀತಿ ಮತ್ತೊಂದು ಕ್ಷಣದಲ್ಲಿ ಮಾಯವಾದರೆ ಅದು ಹುಸಿ ಪ್ರೀತಿ ಮತ್ತು ಹುಸಿ ಭಕ್ತಿಯಲ್ಲದೆ ಬೇರೇನೂ ಅಲ್ಲ. ಹಕಂಡಂತೆ...ಯಾವುದೇ ಭ್ರಮೆಯಲ್ಲಿ ಬೀಳದೇ ನಿಷ್ಕಾಮ ಪ್ರೀತಿ, ಸ್ನೇಹ ಭಾವವನ್ನು ಅಳವಡಿಸಿ-

-ಕೊಂಡರೆ ಬದುಕಿಗೊಂದು ಅರ್ಥ ಬಂದೀತು !


ಭಾವ ಸಕ್ಕರೆ, ಬಾಂಧವ್ಯದ ಕೆನೆಹಾಲು

ಸವಿಯಾದೀತು ಬೆರಕೆ, ಬದುಕು ಹಿತವಾಗಿ|

ಭಾವ ಸೊರಗಿದೊಡೆ ಸಂಬಂಧ ರಸಹೀನ

ಭವವೇಕೆ ದೂಷಿಸುವೆ - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

6 views0 comments

Comments


bottom of page