top of page

ಇರುಳು ಜಾರುತಿದೆ ಸುಮ್ಮನೆ


ಇರುಳು ಜಾರುತಿದೆ ಸುಮ್ಮನೆ

ಆದರೂ ಮಾಧವನ ಸುಳಿವಿಲ್ಲ,ನಿದಿರೆಯದೂ..

ಅವನು ಬಾರದೆ ನಿದಿರೆಯೂ ಸುಳಿಯದು

ಸುಮ್ಮನೆ ಜಾರುತಿದೆ ಇರುಳು

ಮಾಧವ ಕೊಟ್ಟ ಮಾತು ಮರೆತನೇ?

ರಾಧೆ ಅವನಿಗಾಗಿ ಕಾದು ಕುಳಿತಿಹಳು

ದೀಪದ ಮಂದಬೆಳಕಲ್ಲಿ ಅದನ್ನೇ ದಿಟ್ಟಿಸುತ

ಅವನ ಕಾಣುತ ಅದರಲ್ಲಿ..

ನಿದಿರೆ ಬಾರದು..

ಆದರೂ ಇರುಳು ಜಾರುತಿದೆ...

ಚಿಂತಾಮಗ್ನಳಾಗಿರುವಳು

ಅವಳೊಳಗೇ ಪ್ರಶ್ನಿಸಿಕೊಳ್ಳುತಾ..

ಅವನ ಸಖಿಯರೇನಾದರು

ದಾರಿಗೆ ಅಡ್ಡಿಪಡಿಸಿರಬಹುದೆ?

ಅಥವಾ ಅವನ ಶತ್ರುಗಳ ದೃಷ್ಟಿಯೇನಾದರೂ

ತಗುಲೀತೆ..?

ನಿದಿರೆಯ ಸುಳಿವಿಲ್ಲ..

ಇರುಳು ಜಾರುತಿದೆ...

ಎದೆಯಲರಿಯುತಿಹ ಪ್ರಲಾಪದಳಲು

ಮತಿಗೆಡಿಸುತಿರಲು ರಾಧೆಯ..

ಕಾತರದಿ ಕಾದು ಅಳುತಿದೆ ಶ್ಯಾಮನಿಗೆ ಹೃದಯ

ಇನ್ನೂ ಬಾರದ ಅವನ ನೆನೆದು ಧ್ಯಾನದಲಿ..

ನಿದಿರೆ ಸುಳಿಯದು..

ಇರುಳು ಸುಮ್ಮನೆ ಜಾರುತಿದೆ...


ಲಕ್ಷ್ಮೀ ದಾವಣಗೆರೆ



ಸೂಕ್ಷ್ಮ ಸಂವೇದಿಯಾಗಿರುವ ಪ್ರತ್ಯುತ್ಪನ್ನಮತಿತ್ವದ ಆಲೋಚನೆ.ಕಾಂ ಬಳಗದ ಕವಯತ್ರಿ ಲಕ್ಷ್ಮೀ ದಾವಣಗೆರೆ ಅವರು ಬರೆದಿರುವ " ಇರುಳು ಜಾರುತಿದೆ ಸುಮ್ಮನೆ" ಎಂಬ ಕವನ ನಿಮ್ಮ ಓದು ಮತ್ತು‌ ಸಹಸ್ಪಂದನಕ್ಕಾಗಿ‌


ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

40 views0 comments

Comments


bottom of page