ಝಗಝಗಿಸುವಾ ಆಸೆ ನಳನಳಿಸುವಾ ಆಸೆ ಮೊಮ್ಮೊದಲ ವಸಂತ ಋತು ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ ಕವಿಗೆ ಕಾವ್ಯದಾ ರಚನೆಯಮೇಲಾಸೆ ಕಲಾಕಾರನಿಗೆ ಚಿತ್ರ ಬಿಡಿಸುವಾ ಆಸೆ ಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆ ನಟರಾಜನಿಗೆ ತನ್ನ ನೃತ್ಯದಾಮೇಲಾಸೆ ಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ. ಮಾಗಿಯ ಚಳಿಯು ಇನಿಯನಿಗೆ ಆದರೆ, ಚಂದ್ರನ ಬೆಳದಿಂಗಳು ಗೆಳತಿಗೆ ಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು, ಏಕಾಂತದಲಿ ಕುಳಿತಾಗ ಕವಿತೆಯ ಬರೆದು ಎಲ್ಲರೊಡಗೂಡಿ ಹಾಡುವ ಆಸೆ ಎನಗೆ. ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇ ಅವನಿಗೂ ಕೂಡ ಇತ್ತೊಂದು ಆಸೆ, ಆಸೆಯ ಬಿಡಬೇಕು ಎನ್ನುವ ಮಹದಾಸೆ. ಆಸೆ ಎಂಬುದು ಎಲ್ಲರಾ ಬದುಕಿನ ಬಿಡಿಸಲಾಗದ ಬಂಧ ಮಿತಿ ಮೀರದೇ ಇದ್ದರೆ ಬೆಲೆ ಉಂಟು ಆಸೆಗೂ ಕಂದಾ.
ಪೂಜಾ ನಾರಾಯಣ ನಾಯಕ
Comments