ಭಾವಗಳ ಉಕ್ಜಂದವೆ ಹಾಗೆ
ಮೂಲಕಾವೇರಿಯಲ್ಲಿ ನಿಗದಿಯಾದ
ಸಮಯದಲ್ಲಿ ಕುಂಡದಲ್ಲಿ
ಕಾಶಿ ಭಾಗೀರಥಿಯು ಉಕ್ಕಿ
ಅಲ್ಲಿಯೆ ಸೊಕ್ಕಿ ಪುಷ್ಕರಣಿಗೆ
ಚಿಮ್ಮಿ ಎಲ್ಲರನ್ನು ಭಕ್ತಿ
ಭಾವದೊಳು ತೋಯಿಸಿ
ಮೀಯಿಸಿದಂತೆ ಅಚ್ಚರಿ
ತೀರ್ತೋದ್ಭವದ ಪರಿ
ಭವದ ಪರಿಯು ಒಗಟು
ಎಲ್ಲಿಂದ ಬಂದವರೊ ಎಲ್ಲಿಗೆ
ಹೊರಟಿರುವರು ಅವರು
ಗುರಿ ತಲುಪುವರೊ ಹಾದಿಯಲೆ
ಎಲ್ಲ ಕೊಟ್ಟು ಬಿಟ್ಟು ನಡೆವರೊ
ಮರಳಿ ಬಂದವರಿಲ್ಲ ವರದಿಯ
ತಂದವರಿಲ್ಲ ಅಂತೆ ಕಂತೆಗಳ
ಸಂತೆಯಲಿ ಕಾಲ ಕಳೆವವಗೆ
ಕಾಶಿಯಿಂದ ಬಂದ ವಿಶಾಲಾಕ್ಷಿ
ಭಾಗೀರತಿಯನು ಕರೆದು ತಂದೆ
ಯಾವ ಜನ್ಮದ ಕೆಳೆಯೊ
ಕರುಳ ಕುಡಿಯೊ ಅರ್ಥಕ್ಕೆ
ದಕ್ಕದ ಸಾಲುಗಳು ಕವಿತೆ
ಅಂದುಕೊಂಡು ತೆವಳುತ್ತಿರೆ
ಆಗಸದ ಚಿಕ್ಕೆಯೊಂದು ಕಣ್ಣು
ಮಿಟುಕಿಸೆ ನಿನ್ನ ಮುಖ ಭಾವ
ಅರಗಿಸಿಕೊಳ್ಳಲಾರದೆ ಬಿಕ್ಕುಗಳ
ಹೆಕ್ಕುತ್ತಾ ಶಬ್ದಗಳ ಸೆರಗಿನಲಿ
ಮುಖವ ಮುಚ್ಚಿಕೊಂಡೆ ನಾನು
ನೀನು ತಾಯಿ ನಾನು ಮಗು
ಅಳುವ ಕಂದಗೆ ಅಮ್ಮನ ಲಾಲಿ
ನಗು ಅಳುವಿನ ಜೋಕಾಲಿ
ಎನ್ನುತ್ತಾ ತೆವಳುತ್ತಿರುವಾಗ
ಆಗಸದ ಚುಕ್ಕೆಯೊಂದು ಕಣ್ಣು
ಮಿಟುಕಿಸಿದಾಗ ನಿನ್ನ ಮುಖ
ಭಾವವನು ನಾನು
ಅರಗಿಸಿಕೊಳ್ಳಲಾರದೆ ಬಿಕ್ಕುಗಳ
ಹೆಕ್ಕುತ್ತಾ ಶಬ್ದಗಳ ಸೆರಗಿನಲ್ಲಿ
ಮುಖವ ಮುಚ್ಚಿಕೊಂಡೆನೆ ನಾನು
ಶ್ರೀಪಾದ ಶೆಟ್ಟಿ.
Comments