ಮನುಷ್ಯನು ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸ್ವಾಸ್ಥ್ಯವಾಗಿದ್ದರೆ ಆರೋಗ್ಯವೆಂದು ಭಾವಿಸುತ್ತೇವೆ.
ದೈಹಿಕ ಆರೋಗ್ಯ: ದೇಹಕ್ಕೆ ಯಾವುದೆ ಖಾಯಿಲೆ- ಜ್ವರ,ಕೆಮ್ಮು,ಗಾಯಗಳು ಇತ್ಯಾದಿ ತೊಂದರೆ ಇಲ್ಲದಿರುವುದು,ವಯಸ್ಸಿಗೆ ತಕ್ಕಂತೆ ಕೆಲಸ ಮಾಡುವ ಶಕ್ತಿ ಇತ್ಯಾದಿ.
ಮಾನಸಿಕ ಆರೋಗ್ಯ: ಮನಸ್ಸು ಉಲ್ಲಾಸದಿಂದ ಇರುವುದು.ಹೊಸ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವುದು,ಸಮಸ್ಯೆಗಳು ಬಂದಾಗ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದು ಇತ್ಯಾದಿ.
ಸಾಮಾಜಿಕ ಆರೋಗ್ಯ: ಸಂಸಾರದಲ್ಲಿ, ಸಮಾಜದಲ್ಲಿ, ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಇರುವುದು. ಅನ್ಯ ಜಾತಿ, ಮತಗಳೊಂದಿಗೆ ಸಹಿಷ್ಣುತೆಯಿಂದ ನಡೆದುಕೊಳ್ಳುವುದು.ಸಾಮಾಜಿಕ ಆರೋಗ್ಯವು ಮನೆಯಿಂದಲೆ ಆರಂಭವಾಗುತ್ತಿದ್ದು,ಕೌಟುಂಬಿಕ ಸಾಮರಸ್ಯ ಬಹಳ ಮುಖ್ಯ.
ಇವುಗಳೆಲ್ಲದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಆದ್ಯಾತ್ಮಿಕ ಆರೋಗ್ಯ (Spiritual Health)ವು ಇದ್ದರೆ ಪರಿಪೂರ್ಣ ಆರೋಗ್ಯವೆಂದು ಹೇಳಿದೆ.
ಆಧ್ಯಾತ್ಮಿಕ ಆರೋಗ್ಯ: ದೇವರಲ್ಲಿ ಭಕ್ತಿ.ಪೂಜೆ ಪುನಸ್ಕಾರ,ಜಪ ತಪ ಮಾಡುವುದು.ಧರ್ಮ ಗ್ರಂಥಗಳನ್ನು ಓದುವುದು ಇವಿಷ್ಟೇ ಅಲ್ಲ.
ಎಲ್ಲ ಜೀವಿಗಳಲ್ಲಿ ಪ್ರೀತಿ,ಕರುಣೆ,ಅಹಿಂಸಾ ಮನೋಭಾವ, ದಾನ ಧರ್ಮ,ದುಶ್ಚಟಗಳಿಂದ ದೂರ ಇರುವುದು ಇತ್ಯಾದಿ ಮಾನವೀಯ ಮೌಲ್ಯಗಳನ್ನು ಅನುಸರಿಸುವುದರಿಂದ ಆಧ್ಯಾತ್ಮಿಕ ಆರೋಗ್ಯವನ್ನು ಅನುಭವಿಸ ಬಹುದು.
ಆದ್ದರಿಂದ ಪರಿಪೂರ್ಣ ಆರೋಗ್ಯ ಎಂದರೆ, ದೈಹಿಕ,ಮಾನಸಿಕ,ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಸಮ್ಮಿಲನವೆ ಆಗಿದೆ.
ಆಧ್ಯಾತ್ಮಿಕ ಆರೋಗ್ಯವೊಂದಿದ್ದರೆ ಪರಿಪೂರ್ಣ ಆರೋಗ್ಯ ಸಾಧ್ಯ.
ಡಾ.ಕೆ.ಪಿ.ದಾಮೋದರ
ಡಾ.ಕೆ.ಪಿ.ದಾಮೋದರ ಎಂ.ಬಿ.ಬಿ.ಎಸ್.,ಎಂ.ಡಿ.,ಡಿ.ಜಿ.ಒ.,ಎಂ.ಎಸ್.ಸಿ(ಯೋಗ)
ಅವರುನಮ್ಮ ನಡುವಿನ ಪ್ರಜ್ಞಾವಂತ ಮತ್ತು ಮಾನವೀಯತೆಯ ಸಾಕಾರವೆ ಆಗಿದ್ದಾರೆ.ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ,ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ನಮ್ಮ ಆಲೋಚನಾ ವೇದಿಕೆಯ ಗೌರವ ಸಲಹಗಾರರು. ನಿವೃತ್ತಿಯ ನಂತರ ಆರೋಗ್ಯ ಶಿಕ್ಷಣ ನೀಡುವಲ್ಲಿ,ಸಮಾಜ ಸೇವಾಕಾರ್ಯದಲ್ಲಿ ಆಸಕ್ತರಾಗಿರುವ ಅವರು ಯೋಗ ವಿಜ್ಞಾನದಲ್ಲಿ ಎಂ.ಎಸ್.ಸಿ. ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಪಡೆದು ಕಲಿಕೆಗೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಅನನ್ಯ ಸಾಧಕರು.
Comments