top of page

ಅಡಿಗೆಯವಳ ಮಗಳು

ಬೇಯಿಸಿ ಬಡಿಸುವುದನ್ನೇ

ಬದುಕಾಗಿಸಿಕೊಂಡವಳ

ಮಗಳು

ಬರೀ ಅಡಿಗೆ ಮಾಡುವುದನ್ನು

ಮಾತ್ರ ಆಟವಾಡುತ್ತಿದ್ದಳು


ದೊಡ್ಡ ದೊಡ್ಡ ಬೊಂಬೆಗಳನ್ನು

ಕುಣಿಸುವವರ ನಡುವೆ

ಇವಳೊಂದು ಚಿಕ್ಕ

ಗೆಜ್ಜೆಯನ್ನಾದರೂ ಕಟ್ಟಿ

ಕುಣಿಯಲೆಂದು ಎಣಿಸಿದವಳೇ

ಒಂದು ಸಂಜೆ

ಪುಟಾಣಿ ಕನಸುಗಳನ್ನು

ಕೊಟ್ಟು ಬಂದೆ ನಾನು


ಬೆಳಗ್ಗೆ ಹೋಗಿ ನೋಡಿದರೆ

ಅದನ್ನೂ

ಬಡಿಸಲೆಂದೇ ಹುರಿದುಬಿಟ್ಟಿದ್ದಳು


ಅವಳಿಗೆ ಕಲಿಸಿದ

ಅಕ್ಷರಗಳೂ ಅನ್ನವಾಗುವ

ಪರಿ ಕಂಡು

ಅಚ್ಚರಿಗೊಂಡ ನಾನೀಗ

ನನ್ನ ಭ್ರಮೆಗಳನ್ನು

ಅವಳ ತಲೆಗೆ ತುರುಕುವುದ ಬಿಟ್ಟೇ

ಬಿಟ್ಟಿದ್ದೇನೆ


ಸಂಧ್ಯಾ ವಿನಾಯಕ ಅಘನಾಶಿನಿ

6 views0 comments

Comments


bottom of page