ಬಾಲ್ಯದ ಆಟ-
'ಕಣ್ಣೇ ಕಟ್ಟೆ-
ಕಾಡೇ,ಗೂಡೇ,,'
ನಡೆದಿದೆ ವ್ರದ್ಧಾಪ್ಯ
ದಂಚಿನ ವರೆಗೂ.
ಕಾಡು ಗೂಡಾಗಿ,
ಗೂಡು ಕಾಡಾಗಿ,
ಒಂದೊಂದು ಸಲ
ಎರಡೂ ಒಂದೇ ಆಗಿ
ವಿಪರೀತ ಕಾಡಿದಾಗ,,,
ಕಣ್ಣಕಟ್ಟಿದ ಕಪ್ಪುಪಟ್ಟಿ
ಕಳೆಯಲು ಕೊಸರಾಟ,
ಹೋರಾಟ,,,,!
ಇದೂ ಒಂಥರಾ-
ಖುಷಿಯ ಅನುಭವ,
'ಅನುಭಾವ.'
ಆಟ ವೆಂದುಕೊಂಡಾಗ.
--ಅಬ್ಳಿ,ಹೆಗಡೆ.*
Kommentare