ಇದು ಲಾವಂಚ ನಮ್ಮಲ್ಲಿ ಹೇಳೋದು ಮಡಿವಾಳಬೇರು.
ಒಂದುರೀತಿ ಹುಲ್ಲಿನ ಗಿಡವಾಗಿದ್ದು ನಾಲ್ಕರಿಂದ ಐದು ಅಡಿ ಬೆಳೆಯುತ್ತೆ ಇದು ಮಜ್ಜಿಗೆಹುಲ್ಲಿನಂತೆಯೇ ಅಂಚು ಹರಿತವಾಗಿದ್ದು ತಾಗಿದರೆ ಕತ್ತರಿಸುವ ಗುಣ ಹೊಂದಿದೆ.
ಇದರ ಬೇರನ್ನು ಮೊದಲು ಬಟ್ಟೆ ಇಡುವಾಗ ಅದರೊಂದಿಗೆ ಇಡುತ್ತಿದ್ದರು ಇದು ಸುವಾಸನೆಯೊಂದಿಗೆ ಕೀಟಬರದಂತೆ ಮಾಡುವ ಗುಣ ಹೊಂದಿದೆ, ಔಷಧ ಕ್ಕೆ ಬಳಸುವ ಭಾಗ ಬೇರು
೧.ಬೆವರು ಕೆಟ್ಟವಾಸನೆ ಬರುತ್ತಿದ್ದರೆ
ನೀವು ಡಿಯೊಡ್ರೆಂಟ್ ಬಳಸುವ ಬದಲು ಇದನ್ನೇ ಮಾಡಿ ಆರೋಗ್ಯಕ್ಕೂ ಒಳ್ಳೆಯದು ಯಾವುದೇ ಅಡ್ಡಪರಿಣಾಮ ಇಲ್ಲ
ಮಾಡೋದ್ ಹೇಗೆ ಅಂತೀರಾ , ಮೊದಲು ೧೦/೧೫ ಗ್ರಾಂ ಲಾವಂಚ ಬೇರು, ಕೊತ್ತಂಬರಿ ಅರ್ಧ ತೊಲೆ,ಶಾಜೀರಿಗೆ ಕಾಲು ತೊಲೆ ಇವನ್ನೆಲ್ಲಾ ಒಂದು ಸೇರು ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ಹಾಗೇ ಇಟ್ಟು ಮಾರನೇ ದಿನ ಬೆಳಿಗ್ಗೆ ಅದೇ ನೀರಿನಿಂದ ಅರೆಯಿರಿ ಇದಕ್ಕೆ ಆಕಳ ಹಾಲು ಮತ್ತು ಸಕ್ಕರೆ ಹಾಕಿ ಕುಡಿಯಿರಿ ಇದನ್ನು ದಿನಕ್ಕೊಮ್ಮೆ ಒಂದುವಾರ ಮಾಡಿ
೨.ಗರ್ಭಿಣಿಯರ ವಿಷಮಶೀತ ಜ್ವರ
ರೋಗ ಲಕ್ಷಣಗಳು ,ಅಶಕ್ತಿ,ನಡೆದಾಡಿದರೆ ತಲೆನೋವು, ಕೈಕಾಲು ನೋವು,ಹಸಿವಾಗದೇಇರುವುದು ಬೆಳಿಗ್ಗೆ ಜ್ವರ ಕಡಿಮೆ ಇದ್ದು ಸಂಜೆ ಹೆಚ್ಚಾಗುವುದು
ಮಡಿವಾಳ ಬೇರು, ಅಮ್ರತಬಳ್ಳಿ, ಶುಂಠಿ, ರಕ್ತಚಂದನ, ಸಾಧ್ಯವಿದ್ದಲ್ಲಿ ತಾವರೆಗಡ್ಡೆ ೧ , ಉಳಿದವು ಎಲ್ಲಾ ಅರ್ಧ ತೊಲೆ ತಗೊಂಡು ಜಜ್ಜಿ ಪುಡಿಮಾಡಿ ೪ ಲೋಟನೀರು ಹಾಕಿ ೧ ಲೋಟಕ್ಕೆ ಬತ್ತಿಸಿ ಹಾಗೆ ಸೋಸಿ ದಿನಕ್ಕೆ ೩ ಹೊತ್ತು ಸ್ವಲ್ಪ ಸಕ್ಕರೆ ಸೇರಿಸಿ ಕುಡಿಸಿ
೩.ಉಷ್ಣತೆ
ಇದಿರಿಂದಾಗುವ ಹೊಟ್ಟೆ ಉರಿಗೆ ಬೇರನ್ನು ಜಜ್ಜಿ ನೀರಿಗೆ ಹಾಕಿ ಕುಡಿಯುತ್ತಿರಿ.
ಪಶು ಚಿಕಿತ್ಸೆ
ಪಶುಗಳು ಪೆಟ್ಟುಮಾಡುಕೊಂಡ ಊತಕ್ಕೆ ಲಾವಂಚ ಬೇರನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ದಿನಕ್ಕೆ ೨..೩ಸಲ ಹಚ್ಚಬೇಕು.
ಬಟ್ಟೆ ರಕ್ಷಣೆ
ಬಟ್ಟೆಗೆ ಹುಳುಗಳು ಕಡಿಯದಂತೆ ಮತ್ತು ಸುವಾಸನ್ವ್ಗೆ ಬೇರನ್ನು ಬಟ್ಟೆ ಇಡುವ ಸ್ಥಳದಲ್ಲಿ ಇಡಬಹುದು.
ಪ್ರದೀಪ ಜಿ.ಹೆಗಡೆ.
コメント