ಪ್ರತಿಯೊಬ್ಬರಲೂ ಇಹುದು ಒಂದೊಂದು ಪ್ರತಿಭೆ!
ಗುರುತಿಸಿ ಪ್ರೋತ್ಸಾಹಿಸಿದಾಗ ಹೆಚ್ಚುವುದು ಹಿರಿಮೆ!
ಪರಿಣಿತಿ ಪಡೆದಾಗ ಮೂಡುವುದು ಗರಿಮೆ!
ಅಭಿನಂದನೆಗೆ ಉಕ್ಕುವುದು ಸಂತಸದಾ ಚಿಲುಮೆ!!
ಸ್ಪರ್ಧೆಯಲಿ ಇರಲಿ ಆರೋಗ್ಯಕರ ಪೈಪೋಟಿ!
ಮುಂದೆ ನಡೆಯಬೇಕು ಕಾಲೆಳೆಯುವವರ ದಾಟಿ!
ಪೈಪೋಟಿಯಲ್ಲಿ ಏರಿಳಿತವು ಸಹಜ!!
ತಿಳಿದು ಸಾಗಬೇಕಿದೆಯಲ್ಲ ಮನುಜ!!
ಅಳವಡಿಸಿಕೊಂಡಾಗ ಸಜ್ಜನಿಕೆ -ಆದರ್ಶ!
ಅರಿತಾಗ ಅಳಿಯುವುದು ಸಂಘರ್ಷ!
ಇರಲು ವಿಶೇಷತೆ ಪ್ರತಿಯೊಬ್ಬರ ಜೊತೆಗೆ!
ಅಸೂಯೆ - ಅಹಂಕಾರ ಬೇಡಾ... ಮತಿಗೆ!!!!
ಸಾವಿತ್ರಿ ಶಾಸ್ತ್ರಿ, ಶಿರಸಿ
Comentarios