ಓ ಮನಸೇ .... ಹೀಗೆ!
ನೀನಿರುವೆ ನಿನ್ನ ಹಾಗೇ!!!
ಸುಕೋಮಲ ಹೂವಿನಂತೆ!
ಕಠೋರ - ವಜ್ರದಂತೆ!!!
ಬೆಳಕಿನ ವೇಗಕ್ಕಿಂತ
ಅತಿಶಯವು ನಿನ್ನ ನಡೆ!
ವಿಶ್ವಪರ್ಯಟನೆಯ ಪೂರೈಸುವೆ
ನೀ ಇರುವೆಡೆ!!
ಮರುಗುವೆ ಕೆಲವೊಮ್ಮೆ!
ಮುದಗೊಳ್ಳುವೆ ಹಲವೊಮ್ಮೆ!!
ಭೂತಕಾಲವ ನೆನಪಿಸಿ!
ಭವಿಷ್ಯವ ಯೋಚಿಸಿ!!
ವರ್ತಮಾನದೆ ಬದುಕು!
ಪ್ರತಿಕ್ಷಣವ ಸಂಭ್ರಮಿಸು!
ಅದಲು -ಬದಲು ಆಟ ಬಿಡು!
ಸರಳ - ಸಜ್ಜನಿಕೆಯ ಹರಡು!!
ಸಾವಿತ್ರಿ ಶಾಸ್ತ್ರಿ, ಶಿರಸಿ
Comments