top of page

ಉತ್ಸವ 🏵️

ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಉತ್ಸವ!!

ಝೇಂಕರಿಸಿದೆ ಕವಿ ಮನಗಳ ಸಮ್ಮಿಲನದ ಕಲರವ!!


ಹಿರಿಯ ಕವಿ ದೊಡ್ಡ ರಂಗೇಗೌಡರ ಸರ್ವಾಧ್ಯಕ್ಷತೆಯಲ್ಲಿ!!

ಸಾಹಿತಿಗಳ -ಮಂತ್ರಿ ಮಹೋದಯರ ಉಪಸ್ಥಿತಿಯಲ್ಲಿ!!


ಹಬ್ಬದ ಸಂಭ್ರಮ- ಝಗಮಗಿಸಿದೆ ನಗರ ಹಾವೇರಿ!!

ಸಾಹಿತ್ಯಾಸಕ್ತರ ಉತ್ಸಾಹದ ಪರಿ- ತಂದಿದೆಯಲ್ಲ ಅಚ್ಚರಿ!!


ವಿವಿಧ ಗೋಷ್ಠಿಗಳು ವಿಚಾರ ಸಂಕಿರಣಗಳು!!

ಮಂಡನೆ -ಖಂಡನೆ,ಅಭಿವ್ಯಕ್ತಿ- ಅಭಿಪ್ರಾಯಗಳು!!


ಭಾವೈಕ್ಯತೆ - ಭಾಷಾಭಿಮಾನ ಕಳೆಗಟ್ಟುತಿರಲಿ!!

ದುರಭಿಮಾನ - ದುರಹಂಕಾರ ಸನಿಹ ಸುಳಿಯದಿರಲಿ!!


ಶಿರಸಿಯಲ್ಲೂ ಜರುಗಲಿದೆ ಸಾಂಸ್ಕೃತಿಕ ಉತ್ಸವ!!

ನೃತ್ಯ -ಸಂಗೀತ -ಸನ್ಮಾನ ವಿವಿಧತೆಗಳ ವೈಭವ!!


ಒಂದಾದ ಮೇಲೊಂದು ಕಾರ್ಯಕ್ರಮಗಳ ಸೊಬಗು!!

ಚಿಣ್ಣರಾದಿಯಾಗಿ, ಹಿರಿಯರಲ್ಲೂ ಮೂಡಿಸಿದೆ ಬೆರಗು!!


ಸಾವಿತ್ರಿ ಶಾಸ್ತ್ರಿ, ಶಿರಸಿ

7 views0 comments

Komentarze


bottom of page